Multiple Accounts: ಬ್ಯಾಂಕುಗಳಲ್ಲಿನ ಉಳಿತಾಯ ಖಾತೆದಾರರಿಗೆ ಆರ್ ಬಿಐ ಎಚ್ಚರಿಕೆ, ಕಟ್ಟಬೇಕು ಹೆಚ್ಚಿನ ದಂಡ.
ಹೆಚ್ಚಿನ ಉಳಿತಾಯ ಖಾತೆ ಹೊಂದಿರುವುದರಿಂದ ಆಗುವ ಅಡ್ಡ ಪರಿಣಾಮಗಳು ಏನು.
RBI New Rule For Multiple Account Holders: ಸಾಮಾನ್ಯವಾಗಿ ಎಲ್ಲರು ತಮ್ಮ ಬಳಿ ಇರುವ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು ಬಯಸುತ್ತಾರೆ. ಬ್ಯಾಂಕುಗಳಲ್ಲಿ ಠೇವಣಿ ಇಡಲು ಯಾವುದಾದರು ಬ್ಯಾಂಕ್ ನಲ್ಲಿ ಖಾತೆಯನ್ನು ತೆಗೆದಿರಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಜನರು ಬ್ಯಾಂಕ್ ಖಾತೆಯನ್ನು ತೆರೆದಿರುತ್ತಾರೆ. ಪ್ರತಿಯೊಬ್ಬರೂ ಕೂಡ ಒಂದಾದರು ಬ್ಯಾಂಕ್ ಖಾತೆಯನ್ನು ತೆರಿದಿರುತ್ತಾರೆ. ಆಧಾರ್ ಕಾರ್ಡ್,ಪಾನ್ ಕಾರ್ಡ್ ಇವೆಲ್ಲದರ ಜೊತೆಗೆ ವೈಯಕ್ತಿಕ ಬ್ಯಾಂಕ್ ಖಾತೆ ಕೂಡ ಮುಖ್ಯವಾಗಿರುತ್ತದೆ.
ಕೆಲವು ದೊಡ್ಡ ಮೊತ್ತದ ಆದಾಯವು ಹೆಚ್ಚಾಗಿ ನಗದು ರೂಪದಲ್ಲಿ ಕೈಯ್ಲಲಿ ನೀಡುವುದಕ್ಕಿಂತ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತವೆ. ಇನ್ನು ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುದರಿಂದ ಬ್ಯಾಂಕುಗಳು ಬಡ್ಡಿಯನ್ನು ಕೂಡ ನೀಡುತ್ತದೆ. ಉಳಿತಾಯ ಖಾತೆಯ್ಲಲಿ ಹಣವನ್ನು ಠೇವಣಿ ಇಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು.
![RBI warns savings account holders in banks](https://karnatakatoday.in/wp-content/uploads/2023/08/RBI-new-rule.png)
ಬ್ಯಾಂಕುಗಳಲ್ಲಿನ ಉಳಿತಾಯ ಖಾತೆದಾರರಿಗೆ ಆರ್ ಬಿಐ ಎಚ್ಚರಿಕೆ
ಇನ್ನು ಉಳಿತಾಯ ಖಾತೆಯ್ನನು ಹೊಂದುವವರು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಇತ್ತೀಚೆಗಂತೂ ಹಣದ ವಂಚನೆಯ ಪ್ರಕರಣಗಳು ಸಾಕಷ್ಟು ಹೆಚ್ಚುತ್ತಿದೆ. ಇನ್ನು ಒಂದ್ಕಕಿಂತ ಹೆಚ್ಚು ಉಳಿತಾಯ ಖಾತೆಯನ್ನು ಹೊಂದಿರುವವರು ಹೆಚ್ಚಿನ ನಷ್ಟವನ್ನು ಕೂಡ ಅನುಭವಿಸಬೇಕಾಗುತ್ತದೆ.
ಇದೀಗಾ ಆರ್ ಬಿಐ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಯ್ನನು ಹೊಂದಿರುವವರು ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಹೆಚ್ಚಿನ ಉಳಿತಾಯ ಖಾತೆ ಹೊಂದಿರುವುದರಿಂದ ಆಗುವ ಅಡ್ಡ ಪರಿಣಾಮಗಳು ಏನು ಹಾಗು ಯಾವ ರೀತಿಯಲ್ಲಿ ನಷ್ಟವನ್ನು ಎದುರಿಸ ಬೇಕಾಗುತ್ತದೆ ಎಂದು ಆರ್ ಬಿಐ ಗ್ರಾಹಕರಿಗೆ ತಿಳಿಸಿದೆ.
![RBI New Rule For Multiple Account Holders](https://karnatakatoday.in/wp-content/uploads/2023/08/bank-account-1.png)
ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆದಾರರಿಗೆ ಮಹತ್ವದ ಮಾಹಿತಿ
ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಖಾತೆ ತೆರೆಯಲು ಆಯ್ಕೆಯನ್ನು ನೀಡುತ್ತವೆ. ಸಾಮಾನ್ಯವಾಗಿ ಜನರು ಹೆಚ್ಚಾಗಿ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ. ಯಾವುದೇ ವ್ಯಕ್ತಿಯು ಆದಾಯವನ್ನು ಗಳಿಸುತ್ತಿದ್ದರೆ ಬಹು ಉಳಿತಾಯ ಖಾತೆಯನ್ನು ಹೊಂದಿರುವುದಕ್ಕಿಂತ ಒಂದೇ ಉಳಿತಾಯ ಖಾತೆಯನ್ನು ಹೊಂದಿದರೆ ಯಾವುದೇ ರೀತಿಯ ನಷ್ಟ ಎದುರಾಗುವುದಿಲ್ಲ. ಈ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ.
ತೆರಿಗೆ ಪಾವತಿದಾರರಿಗೆ ಬಹು ಉಳಿತಾಯ ಖಾತೆ ಹೆಚ್ಚಿನ ನಷ್ಟವನ್ನು ನೀಡುತ್ತದೆ
ಒಂದು ಉಳಿತಾಯ ಖಾತೆಯ ನಿರ್ವಹಣೆಯು ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ತೆರಿಗೆ ಪಾವತಿಯ ಸಮಯದಲ್ಲಿ ಉಳಿತಾಯ ಖಾತೆಯ ವಿವರವನ್ನು ನೀಡಬೇಕಾಗುತ್ತದೆ. ಒಂದು ಬ್ಯಾಂಕ್ ನಿರ್ವಹಣೆಯು ತೆರಿಗೆ ರಿಟರ್ನ್ ಸಲ್ಲಿಸುವಾಗ ಬ್ಯಾಂಕಿಂಗ್ ವಿವರಗಳು ಒಂದೇ ಬ್ಯಾಂಕ್ ಖಾತೆಯಲ್ಲಿ ಲಭ್ಯವಿದ್ದರೆ ತೆರಿಗೆ ಪಾವತಿ ಸುಲಭವಾಗುತ್ತದೆ. ಇನ್ನು ಒಂದು ಉಳಿತಾಯ ಖಾತೆಯನ್ನು ಹೊಂದಿದ್ದರೆ ಹೆಚ್ಚಿನ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಬಹುದು.
![High penalty to be paid into multiple savings accounts](https://karnatakatoday.in/wp-content/uploads/2023/08/RBI-latest.png)
ಬಹು ಉಳಿತಾಯ ಖಾತೆ ವಂಚನೆಗೆ ಗುರಿ ಮಾಡುತ್ತದೆ
ಬಹು ಉಳಿತಾಯ ಖಾತೆಯು CIBIL ರೇಟಿಂಗ್ ಮೇಲೆ ಪರಿಣಾಮವನ್ನ ಬೀರುತ್ತದೆ. ಇನ್ನು ಎರಡಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯನ್ನು ಹೊಂದಿದ್ದರೆ ಒಂದು ಉಳಿತಾಯ ಖಾತೆಗೆ TDS ಅನ್ವಯಿಸುವ ಬದಲಾಗಿ ಎಲ್ಲ ಉಳಿತಾಯ ಖಾತೆಗೆ TDS ಅನ್ವಯಿಸುವ ಮೂಲಕ ಕೆಲವೊಮ್ಮೆ ವಂಚನೆಗೆ ಒಳಗಾಗಬೇಕಾಗುತ್ತದೆ.
ಬಹು ಉಳಿತಾಯ ಖಾತೆಗೆ ಕಟ್ಟಬೇಕು ಹೆಚ್ಚಿನ ದಂಡ
ಹೆಚ್ಚಿನ ಉಳಿತಾಯ ಖಾತೆ ಹೊಂದಿದ್ದರೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಕಷ್ಟವಾಗುತ್ತದೆ. ಇನ್ನು ಕನಿಷ್ಠ ಠೇವಣಿ ಇಡದೆ ಇದ್ದರೆ ನೀವು ದಂಡವನ್ನ ಕೂಡ ಕಟ್ಟಬೇಕಾಗುತ್ತದೆ. ಅದೇ ರೀತಿಯಲ್ಲಿ ಅಧಿಕ ಬ್ಯಾಂಕ್ ಜನರ CBIL ಸ್ಕೋರ್ ಮೇಲೆ ನೇರ ಪರಿಣಾಮವನ್ನ ಬೀರುತ್ತದೆ. ಡೆಬಿಟ್ ಕಾರ್ಡ್, AMC, SMS ಸೇವಾ ಶುಲ್ಕ, ಕನಿಷ್ಠ ಬ್ಯಾಲೆನ್ಸ್ ಇತ್ಯಾದಿಗಳ ಶುಲ್ಕ ಪಾವತಿಯ ಹೊರೆ ಹೆಚ್ಚಾಗುತ್ತದೆ.