Agricultural Loan: ಬ್ಯಾಂಕುಗಳಲ್ಲಿ ಸಾಲ ಮಾಡಿರುವ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಮನ್ನಾ ಆಗುತ್ತಾ ಸಾಲ.

ರೈತರ ಬೆಳೆ ಸಾಲ ಪುನರ್ ರಚಿಸುವಂತೆ ಬ್ಯಾಂಕ್ ಗಳಿಗೆ ಕಡ್ಡಾಯ ಆದೇಶ ಹೊರಡಿಸಿದ ಸರ್ಕಾರ.

Agricultural Loan: ಬರಗಾಲದಿಂದ ಅನೇಕ ಕಷ್ಟ ನಷ್ಟಗಳು ಸಂಭವಿಸುತಿರುವುದು ನಾವು ಕಾಣುತ್ತಿರುತ್ತೇವೆ. ಇದರಿಂದಾಗಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಇದನ್ನು ಗಮನದಲ್ಲಿ ಇಟ್ಟುಕೊಂಡ ಸರ್ಕಾರ ಕೆಲವು ಆದೇಶ ಹೊರಡಿಸಿದೆ.

ಅದೇನೆಂದರೆ ಬರಗಾಲದಿಂದ ರೈತರು ಅನುಭವಿಸುತ್ತಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರ ಸಾಲ ಪುನರ್ ರಚಿಸುವಂತೆ ಎಲ್ಲ ಬ್ಯಾಂಕ್ಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಬರಗಾಲದಿಂದ ರೈತರು ಪಡುತ್ತಿರುವ ಕಷ್ಟಕ್ಕೆ ಸರ್ಕಾರ ಈ ಆದೇಶವನ್ನು ಹೊರಡಿಸುತ್ತಿದೆ. ಇದರಿಂದ ರೈತರಿಗೆ ಸಹಕಾರಿ ಆಗಲಿದೆ ಎನ್ನಲಾಗಿದೆ.                               

Agricultural Loan
Image Credit: Tamilorganicfarming

ರೈತರ ಸಾಲ ಪುನರ್ ರಚಿಸುವಂತೆ ಆದೇಶ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಂಕ್ ಗಳ ಸಮಿತಿಯ (ಎಸ್ಎಲ್ಬಿಸಿ) ವಿಶೇಷ ಸಭೆಯಲ್ಲಿ ಸರ್ಕಾರ ರೈತರ ಸಾಲ ಪುನರ್ ರಚಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಕರ್ನಾಟಕದ ಎಸ್ಎಲ್ಬಿಸಿಯ ಉಸ್ತುವಾರಿ ಸಂಚಾಲಕ ಬಿ ಪಾರ್ಶ್ವನಾಥ್ ಅವರು ಮಾತನಾಡಿ, ರಾಜ್ಯದ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರು ಮತ್ತು ಪ್ರಮುಖ ಜಿಲ್ಲಾ ವ್ಯವಸ್ಥಾಪಕರಿಗೆ ಸುತ್ತೋಲೆಗಳನ್ನು ಹೊರಡಿಸಲಾಗಿದೆ.

ಬರಕ್ಕೆ ಬೆಳೆಗಳ ನಾಶದ ಕುರಿತು ಸಮೀಕ್ಷೆ

ಕೇಂದ್ರದ ತಂಡ ಬಳ್ಳಾರಿಗೆ ಭೇಟಿ, ರೈತರ ಸಂಕಷ್ಟ ಆಲಿಸಿದೆ, ಬರ ಪೀಡಿತ ಪ್ರದೇಶಗಳ ರೈತರಿಗೆ ಬ್ಯಾಂಕ್ ಗಳು ನೀಡುವ ವಿವಿಧ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರು ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಕುರಿತು ಚರ್ಚಿಸಲಾಯಿತು.

Agricultural Loan Latest Update
Image Credit: Zeebiz

ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನಷ್ಟದ ವರದಿ

ಆಯಾ ಇಲಾಖೆಗಳು ಸಲ್ಲಿಸಿದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನಷ್ಟದ ವರದಿಗಳನ್ನು ಗಮನಿಸಲಾಯಿತು. ಅದರಂತೆ, ಅರ್ಹ ರೈತರ ಸಾಲವನ್ನು ಪುನರ್ ರಚಿಸಲು ರಾಜ್ಯದ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ನಿಗದಿತ ವಾಣಿಜ್ಯ ಬ್ಯಾಂಕ್ ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಗೆ ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ಕ್ರಮಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಸ್ಟರ್ ನಿರ್ದೇಶನವನ್ನು ಅನುಸರಿಸಲು ಸಲಹೆ ನೀಡಲಾಗಿದೆ ಎಂದು ಹೇಳಿದರು.

Leave A Reply

Your email address will not be published.