Baby Corn: ಸಣ್ಣ ಜಾಗದಲ್ಲಿ ಆರಂಭಿಸಿ ಬೇಬಿ ಕಾರ್ನ್ ಕೃಷಿ, ತಿಂಗಳಿಗೆ ಲಕ್ಷಕ್ಕೂ ಅಧಿಕ ಲಾಭ.

Baby Corn ಕೃಷಿ ಮೂಲಕ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ಲಾಭ ಗಳಿಸಬಹುದು.

Baby Corn Business Profit: ಭಾರತ ದೇಶ ಕೃಷಿಯಲ್ಲಿ ಅಗ್ರಸ್ಥಾನ ಪಡೆದಿದೆ. ಭಾರತೀಯರನ್ನು ಕ್ರಷಿಕರೆಂದೇ ಕೆರೆಯುತ್ತಾರೆ. ಕೃಷಿಯತ್ತ ಜನರ ಒಲವು ಇಂದಿಗೂ ಹೆಚ್ಚುತ್ತಿದೆ. ಇಂದಿನ ಯುವಕರು ತಮ್ಮ ಕೆಲಸ ಬಿಟ್ಟು ತಾವೇ ಕೃಷಿ ಮಾಡಲು ಉತ್ಸಹ ತೋರುತ್ತಿದ್ದಾರೆ. ಏಕೆಂದರೆ ಇಂದಿನ ಕಾಲದಲ್ಲಿ ಸಾವಯವ ತರಕಾರಿಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ.

ಭಾರತದಲ್ಲಿ ಕೃಷಿಯನ್ನು ಹೆಚ್ಚಿಸಲು ಸರ್ಕಾರ ರೈತರಿಗೆ ಸಹಾಯ ಮಾಡುತ್ತಿದೆ. ಕೃಷಿಯ ಮೂಲಕ ಲಕ್ಷಗಟ್ಟಲೆ ಆದಾಯ ಗಳಿಸಬೇಕೆಂದರೆ ಬೇಬಿ ಕಾರ್ನ್ (Baby Corn ) ಕೃಷಿ ಉತ್ತಮವಾಗಿದೆ, ಯಾಕೆಂದರೆ ಸಣ್ಣ ಜಾಗದಲ್ಲೂ ಈ ಕೃಷಿ ಮಾಡಬಹುದಾಗಿದೆ. Baby Corn ಆರೋಗ್ಯಕ್ಕೆ ಒಳ್ಳೇದಾಗಿದ್ದು ಜನರು ಇದನ್ನು ಇಷ್ಟ ಪಟ್ಟು ತಿನ್ನುತ್ತಾರೆ ಹಾಗಾಗಿ ಈ ಕೃಷಿ ಒಳ್ಳೆ ಲಾಭದಾಯಕವಾಗಿದೆ.

Baby Corn Business Profit
Image Credit: Agrifarming

ಮಾರುಕಟ್ಟೆಯಲ್ಲಿ Baby Corn ಗೆ ಬೇಡಿಕೆ ಹೆಚ್ಚಿದೆ
ವಾಸ್ತವವಾಗಿ ದೇಶ ವಿದೇಶಗಳ ಮಾರುಕಟ್ಟೆಯಲ್ಲಿ Baby Corn ಗೆ ಬೇಡಿಕೆ ಹೆಚ್ಚುತಲೇ ಇದೆ. ಹೋಟೆಲ್ ಗಳಲ್ಲಿ , ಪಿಜ್ಜಾ, ಪಾಸ್ತಾದಂತಹ ಚೈನೀಸ್ ಆಹಾರದಲ್ಲಿ ಹಾಗು ರೆಸ್ಟೋರೆಂಟ್‌ ಗಳಲ್ಲಿ ಇದರ ಬಳಕೆ ಹೆಚ್ಚಾಗಿದ್ದು, Baby Corn ಬೇಡಿಕೆಗೆ ಇದು ಒಂದು ಕಾರಣವಾಗಿದೆ .

ವರ್ಷದಲ್ಲಿ ಎಷ್ಟು ಬಾರಿ Baby Corn ಕೃಷಿ ಮಾಡಬಹುದು ?

ಬೇಬಿ ಕಾರ್ನ್ 1 ರಿಂದ 3 ಸೆಂ.ಮೀ ಉದ್ದವಿರುವಾಗ ಮತ್ತು ಕಾಳುಗಳಿಲ್ಲದಿರುವಾಗ ಕೊಯ್ಲು ಮಾಡಲಾಗುತ್ತದೆ. ಈ ರೀತಿ ವರ್ಷದಲ್ಲಿ 3-4 ಬಾರಿ ಕೃಷಿ ಮಾಡಬಹುದು. ಈ ಬೆಳೆ ಸಿದ್ಧವಾಗಲು 45 ರಿಂದ 50 ದಿನಗಳು ಬೇಕಾಗುತ್ತದೆ. ಇಲ್ಲಿ ಉತ್ತಮ ವಿಷಯವೆಂದರೆ ಬೇಬಿ ಕಾರ್ನ್ ಕೃಷಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ.

Baby Corn Business Profit
Image Credit: Krishijagran

Baby Corn ಬೆಳೆಯಿಂದ ಬರುವ ಲಾಭ 
ಬೇಬಿ ಕಾರ್ನ್‌ನಿಂದ ರೈತರು ದುಪ್ಪಟ್ಟು ಆದಾಯ ಗಳಿಸಬಹುದಾಗಿದೆ. ಬೇಬಿ ಕಾರ್ನ್ ಒಡೆದ ನಂತರ ಉಳಿದ ಸಸ್ಯಗಳನ್ನು ಪ್ರಾಣಿಗಳಿಗೆ ಮೇವು ತಯಾರಿಸಲು ಬಳಸಬಹುದು. ಮತ್ತು ಬೆಳೆಯನ್ನು ಕತ್ತರಿಸಿ ಅದರ ಅನುಪಯುಕ್ತ ಸಸ್ಯಗಳನ್ನು ಒಣಗಿಸುವ ಮೂಲಕ ಒಣಹುಲ್ಲಿನಂತೆ ಬಳಸಬಹುದು. ಇದರ ಮೇವು ಪ್ರಾಣಿಗಳಿಗೆ ಪ್ರಯೋಜನಕಾರಿಯಾಗಿದೆ.

Baby Corn ಕೃಷಿಗೆ ಸರ್ಕಾರದಿಂದ ಸಹಾಯ 
Baby Corn ಕೃಷಿ ಮಾಡಲು ಹಣದ ಸಮಸ್ಯೆ ಇದ್ದರೆ ಸರ್ಕಾರದ ಸಹಾಯವನ್ನು ತೆಗೆದುಕೊಳ್ಳಬಹುದು. ಸರ್ಕಾರ ರೈತರಿಗೆ ತೀರಾ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಬೇಬಿ ಕಾರ್ನ್ ಮತ್ತು ಜೋಳದ ಕೃಷಿಗೆ ಸರ್ಕಾರ ರೈತರನ್ನು ಉತ್ತೇಜಿಸುತ್ತಿದೆ. ಇದಕ್ಕಾಗಿ ಸರ್ಕಾರ ಜಾಗೃತಿ ಅಭಿಯಾನವನ್ನೂ ನಡೆಸುತ್ತಿದೆ.

Leave A Reply

Your email address will not be published.