Gruha Lakshami Apply: ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಗಿತ, ರಾಜ್ಯ್ದ ಸರ್ಕಾರದ ಇನ್ನೊಂದು ಘೋಷಣೆ.

ಇದೀಗ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ.

Gruha Lakshami Application Update: ರಾಜ್ಯದಲ್ಲಿ ಇದೀಗ Gruha Lakshami ಯೋಜನೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹಾರಾಡುತ್ತಿವೆ. ಆಗಸ್ಟ್ 30 ರಂದು ರಾಜ್ಯದ ಅರ್ಹ ಗೃಹಿಣಿಯರ ಖಾತೆಗೆ 2000 ಹಣ ಜಮಾ ಆಗಿದೆ. ಇನ್ನು ರಾಜ್ಯದಲ್ಲಿ ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ ಹಣ ಜಮಾ ಆಗಿದೆ.

ರಾಜ್ಯ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆಯುವ ನಿರೀಕ್ಷೆಯಲ್ಲಿದ್ದು ಇದೀಗ ಲಕ್ಷಾಂತರ ಗೃಹಿಣಿಯರ ಕನಸು ಆಗಸ್ಟ್ 30 ರಂದು ನನಸಾಗಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ ಇನ್ನು ಗೃಹಿಣಿಯರಿಗೆ ನೀಡಲಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ.

Gruha Lakshami Application Update
Image Credit: Thesouthfirst

ಅರ್ಹ ಮಹಿಳೆಯರ ಖಾತೆಗೆ 2000 ರೂ. ಜಮಾ
ರಾಜ್ಯದಲ್ಲಿ 1.10 ಕೋಟಿ ಗೃಹಿಣಿಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರ ಖಾತೆಗೆ ಆಗಸ್ಟ್ 30 ರಂದು ಸರ್ಕಾರ ಹಣ ಜಮಾ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯಡಿ 2000 ಹಣವನ್ನು ಪಡೆದವರಿಗೆ ಸರ್ಕಾರ ಸಂದೇಶವನ್ನು ಕಳುಹಿಸುತ್ತದೆ. ಅರ್ಜಿ ಸಲಿಕೆಯಲ್ಲಿ ಯಾವುದೇ ರೀತಿಯ ತಪ್ಪಾದರೂ ಕೂಡ ಯೋಜನೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥೆ ಮಹಿಳೆಯಾಗಿಲ್ಲದೆ ಪುರುಷರಾಗಿದ್ದರೆ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ.

ಹೀಗಾಗಿ ಪಡಿತರ ಚೀಟಿಯಲ್ಲಿನ ತಪ್ಪನ್ನು ಸರಿಪಡಿಸಿ ಅರ್ಜಿ ಸಲ್ಲಿಸಲು ಸಮಯಯಾವಕಾಶ ನೀಡಲಾಗಿತ್ತು. ಈ ಹಿಂದೆ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ಕೊನೆಯ ದಿನಾಂಕವನ್ನು ನಿಗದಿಪಡಿಸಿತ್ತು. ಇದೀಗ ಈ ದಿನಾಂಕವನ್ನು ಸರಕಾರ ವಿಸ್ತರಿಸಿದೆ. ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 14 ರವರೆಗೆ ಸರ್ಕಾರ ಕಾಲಾವಕಾಶವನ್ನು ನೀಡಿದೆ. ಪಡಿತರ ಚೀಟಿ ತಿದ್ದುಪಡಿ ಸಮಯಾವಕಾಶ ವಿಸ್ತರಿಸಿದ ಬೆನ್ನಲ್ಲೇ ಇದೀಗ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಕುರಿತು ಬಿಗ್ ಅಪ್ಡೇಟ್ ಲಭಿಸಿದೆ.

Gruha Lakshami scheme Application
Image Credit: Oneindia

ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಗಿತ
ಇನ್ನು ಈಗಾಗಲೇ ಅರ್ಹ ಫಲಾನುಭವಿಗಳ ಖಾತಗೆ ಸರ್ಕಾರ 2000 ರೂ. ಹಣವನ್ನು ಜಮಾ ಮಾಡಿದೆ. ಕೆಲವರಿಗೆ ಬಹಳ ಒಂದೇ ದಿನದಲ್ಲಿ ಹಣ ಜಮಾ ಆಗಿದ್ದರೆ ಇನ್ನು ಕೆಲ ಮಹಿಳೆಯರಿಗೆ ತಡವಾಗಿ ಹಣ ಜಮಾ ಆಗುತ್ತಿದೆ. ಇನ್ನು ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಸಿದವರಿಗೆ ಸೆಪ್ಟೆಂಬರ್ ನಲ್ಲಿ ಮಾಸಿಕ ಹಣ ಬರುತ್ತದೆ.

ಆಗಸ್ಟ್ 15 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ನಲ್ಲಿ ಮಾಸಿಕ 2000 ಜಮಾ ಆಗಲಿದೆ. ಇನ್ನು ಗೃಹ ಲಕ್ಷ್ಮಿ ಅರ್ಜಿ ಸಲ್ಲಿಕೆ ಇನ್ನು ಕೂಡ ಇರುವುದರಿಂದ ಅರ್ಹ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಗೊಂದಲ ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಅರ್ಜಿ ಸಲಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Leave A Reply

Your email address will not be published.