Septembar Rule: ಈ ಕೆಲಸಗಳನ್ನ ಮಾಡಲು ಸೆಪ್ಟೆಂಬರ್ ಕೊನೆಯ ತಿಂಗಳು, ಎಚ್ಚರಿಕೆ ನೀಡಿದ ಸರ್ಕಾರ.

ಸೆಪ್ಟೆಂಬರ್ ನಲ್ಲಿ ಈ ಎಲ್ಲ ಕೆಲಸಗಳು ಪೂರ್ಣಗೊಳ್ಳದಿದ್ದರೆ ನೀವು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Septembar Month Alert: ಆಗಸ್ಟ್ ಕಳೆದು ಸೆಪ್ಟೆಂಬರ್ ತಿಂಗಳು ಆರಂಭ ಆಗಿದ್ದು ಜನರು ಈ ಕೆಲಸಗಳನ್ನ ಮಾಡಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ಆಗಿರುತ್ತದೆ. ಅದೇ ರೀತಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಈ ಕೆಲಸಗಳನ್ನ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ನಷ್ಟವನ್ನ ಅನುಭವಿಸಬೇಕಾಗುತ್ತದೆ.

ಇನ್ನು 2000 ರೂ. ನೋಟು ವಿನಿಮಯದ ಕೊನೆಯ ದಿನಾಂಕದ ಜೊತೆ ಸೆಪ್ಟೆಂಬರ್ ನಲ್ಲಿ ಸಾಕಷ್ಟು ಕೆಲಸಗಳು ಪೂರ್ಣಗೊಳ್ಳಬೇಕಿದೆ. ನಿಗದಿತಾ ಸಮಯದೊಳಗೆ ನಿಮ್ಮ ಈ ಎಲ್ಲ ಕೆಲಸಗಳು ಪೂರ್ಣಗೊಳ್ಳದಿದ್ದರೆ ನೀವು ಹೆಚ್ಚಿನ ನಷ್ಟವನ್ನು ಎದುರಿಸಬೇಕಾಗಬಹುದು.

Septembar Month Alert
Image Credit: Jagranjosh

ಸೆಪ್ಟೆಂಬರ್ ನಲ್ಲಿ ಈ ಎಲ್ಲಾ ಕೆಲಸಗಳು ಪೂರ್ಣಗೊಂಡಿರಬೇಕು
1. ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರು ಆಧಾರ್ ಕಾರ್ಡ್ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಖಾತೆದಾರರು ಸೆಪ್ಟೆಂಬರ್ 30 ರ ಒಳಗೆ ಆಧಾರ್ ಹಾಗು ಪ್ಯಾನ್ ಕಾರ್ಡ್ ವಿವರವನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ ನಿಮ್ಮ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ಸ್ಥಗಿತಗೊಳ್ಳಲಿದೆ.

Magnus Credit Card Rules
Image Credit: Cardexpert

2. ಮ್ಯಾಗ್ನೆಸ್ ಕ್ರೆಡಿಟ್ ಕಾರ್ಡ್ ನಿಯಮ
ಆಕ್ಸಿಸ್ ಬ್ಯಾಂಕ್ ಸುತ್ತೋಲೆಯ ಮೂಲಕ ವಾರ್ಷಿಕ ಶುಲ್ಕವನ್ನು ಸೆಪ್ಟೆಂಬರ್ 1 ರಿಂದ 10,000 + GST ​​ಯಿಂದ ರೂ. 12,500 + GST ​​ಗೆ ನವೀಕರಿಸಲಾಗುವುದು ಎಂದು ತಿಳಿಸಲಾಗಿದೆ. ರೂ. 10,000 ಮೌಲ್ಯದ ವೋಚರ್‌ ನ ವಾರ್ಷಿಕ ಪ್ರಯೋಜನವನ್ನು ಸ್ಥಗಿತಗೊಳಿಸಲಾಗುತ್ತದೆ. ರೂ. 1,00,000 ಮಾಸಿಕ ಖರ್ಚುಗಳಲ್ಲಿ 25,000 EDGE ರಿವಾರ್ಡ್ ಪಾಯಿಂಟ್‌ಗಳ ಮಾಸಿಕ ಮೈಲಿಗಲ್ಲು ಪ್ರಯೋಜನಗಳನ್ನು ಸೆಪ್ಟೆಂಬರ್ 1 ರಿಂದ ಸ್ಥಗಿತಗೊಳಿಸಲಾಗುತ್ತದೆ.

IDBI Bank Amrit Mahotsav FD Scheme
Image Credit: Forbesindia

3. IDBI ಬ್ಯಾಂಕ್ ಅಮೃತ್ ಮಹೋತ್ಸವ FD ಯೋಜನೆ
ಇನ್ನು IDBI ಬ್ಯಾಂಕ್ ಜನರಿಗಾಗಿ ಅಮೃತ್ ಮಹೋತ್ಸವ FD ಯೋಜನೆಯನ್ನು ನೀಡಿದೆ. ಈ ಯೋಜನೆಯಡಿಯಲ್ಲಿ ಸಾಮಾನ್ಯ ನಾಗರಿಕರು 7.10 ರಷ್ಟು ಹಾಗೆಯೆ ಹಿರಿಯ ನಾಗರಿಕರು ಶೇಕಡಾ 7.60 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ.

Free Aadhaar Update
Image Credit: News18

4. ಉಚಿತ ಆಧಾರ್ ನವೀಕರಣ
ಇನ್ನು UIDAI ಜನರಿಗಾಗಿ ಉಚಿತ ಆಧಾರ್ ನವೀಕರಣವನ್ನು ನೀಡಿತ್ತು. ಸೆಪ್ಟೆಂಬರ್ 14, 2023 ರೊಳಗೆ ಆಧಾರ್ ನವೀಕರಣ ಬಾಕಿ ಇದ್ದವರು ಉಚಿತವಾಗಿ ನವೀಕರಿಸಿಕೊಳ್ಳಬಹುದಾಗಿದೆ. ಸೆಪ್ಟೆಂಬರ್ 14 ರ ನಂತರ 50 ರೂ. ಅನ್ನು ನವೀಕರಣಕ್ಕೆ ಪಾವತಿಸಬೇಕಾಗುತ್ತದೆ. ಉಚಿತ ನವೀಕರಣಕ್ಕೆ ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದೆ.

SBI Wecare FD Scheme
Image Credit: Naidunia

5. SBI ವೀಕೇರ್ FD ಯೋಜನೆ
ಇನ್ನು ಹಿರಿಯ ನಾಗರೀಕರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ವೀಕೇರ್ FD ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು 7.5 ರ ಬಡ್ಡಿದರವನ್ನು ಪಡೆಯಬಹುದು. ಇನ್ನು ಸೆಪ್ಟೆಂಬರ್ 30 ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

6. ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ನಾಮಿನೇಷನ್ ಡೇಟ್
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ಗೆ ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 30 ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

Leave A Reply

Your email address will not be published.