World Cup Trophy: ವಿಶ್ವಕಪ್ ಟ್ರೋಪಿ ಮೇಲೆ ಕಾಲಿಟ್ಟು ಮತ್ತೊಮ್ಮೆ ಉದ್ದಟತನ ತೋರಿದ ಮಾರ್ಷ್, ಇದು ಕ್ರೀಡೆಗೆ ಅವಮಾನ.

ಮತ್ತೆ ಉದ್ದಟತನ ತೋರಿದ ಆಸ್ಟ್ರೇಲಿಯಾ ತಂಡದ ಆಟಗಾರ.

Australia All Rounder Mitchell Marsh: 2023 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಭಾರತ ಹಾಗು ಆಸ್ಟ್ರೇಲಿಯಾ ತಂಡದ ನಡುವೆ ನಡೆಯಿತು. ಬಹಳ ಕುತೂಹಲಕಾರಿ ಆಗಿ ಪ್ರಾರಂಭ ಆದ ಈ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋಲನ್ನು ಕಂಡು ಭಾರತೀಯರ ಬೇಸರಕ್ಕೆ ಕಾರಣರಾದರು.

ಸತತ ಆರನೇ ಬಾರಿಗೆ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಟ್ರೋಫಿಯನ್ನು ಗೆದ್ದು ಬೀಗಿತ್ತು. ಆದರೆ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ (Mitchell Marsh) ಟ್ರೋಫಿ ಮೇಲೆ ಕಾಲಿಟ್ಟು ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮಿಚೆಲ್ ಮಾರ್ಷ್‌ಅವರ ಈ ನಡೆ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

Australia all-rounder Mitchell Marsh
Image Credit: Sports NDTV

ಟ್ರೋಫಿ ಮೇಲೆ ಕಾಲಿಟ್ಟ ಆಲ್‌ರೌಂಡರ್ ಮಿಚೆಲ್ ಮಾರ್ಷ್‌

ಏಕದಿನ ವಿಶ್ವಕಪ್ ಪಂದ್ಯ ಗೆದ್ದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಪಾರ್ಟಿ ಮಾಡಿದ್ದಾರೆ. ವಿಶ್ವಕಪ್ ಕಾರ್ಯಕ್ರಮದ ನಂತರ ಆಸ್ಟ್ರೇಲಿಯಾದ ಆಟಗಾರರು ಹೋಟೆಲ್‌ನಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದು, ಕಾಲುಗಳನ್ನು ಟ್ರೋಫಿ ಮೇಲಿಟ್ಟಿದ್ದರು.

ಟ್ರೋಫಿಯೊಂದಿಗೆ ಮಾರ್ಷ್‌ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಟ್ರೋಫಿ ಮೇಲೆ ಕಾಲಿಟ್ಟ ನಡೆಯನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಇದನ್ನು ಪುನರಾವರ್ತಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.

‘ಆ ಫೋಟೊ ವಿಶ್ವಕಪ್‌ಗೆ ಅಗೌರವ ತೋರಿಸುವ ರೀತಿಯಲ್ಲೇನೂ ಇಲ್ಲ’

ಮಿಚೆಲ್ ಮಾರ್ಷ್‌ ಈ ಕುರಿತು ಆಸ್ಟ್ರೇಲಿಯಾದ ‘ಸೆನ್‌ ರೇಡಿಯೊ’ಯೊಂದಿಗೆ ಮಾತನಾಡಿದ್ದು , ‘ಆ ಫೋಟೊ ವಿಶ್ವಕಪ್‌ಗೆ ಅಗೌರವ ತೋರಿಸುವ ರೀತಿಯಲ್ಲೇನೂ ಇಲ್ಲ’ ಎಂದಿದ್ದಾರೆ.’ಅದರ ಬಗ್ಗೆ ತುಂಬಾ ಯೋಚಿಸಿಲ್ಲ. ಹಲವರು ನನಗೆ ಅದರ ವಿಷಯ ಹೇಳಿದ್ದರೂ, ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡಿಲ್ಲ. ಅಂಥದ್ದೇನೂ ಆ ಚಿತ್ರದಲ್ಲಿಲ್ಲ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಹಾಗೇ ಮಾಡುತ್ತೀರಾ ಎಂದು ಕೇಳಿದಾಗ, ‘ಪ್ರಾಮಾಣಿಕವಾಗಿ ಹೇಳುವುದಾದರೆ ಹೌದು’ ಎಂದು ಉತ್ತರಿಸಿದ್ದಾರೆ.

Mitchell Marsh Latest News
Image Credit: Business-standard

ಟ್ರೋಫಿಗೆ ಗೌರವ ನೀಡುವುದು ಮುಖ್ಯ ಎಂದು ಹೇಳಿದ ಶಮಿ

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರೂ ಮಾರ್ಷ್‌ ಅವರ ನಡೆಯನ್ನು ಖಂಡಿಸಿದ್ದರು. ‘ಟ್ರೋಫಿಗಾಗಿ ವಿಶ್ವದ ಎಲ್ಲ ತಂಡಗಳು ಹೋರಾಟ ನಡೆಸುತ್ತವೆ. ಟ್ರೋಫಿಯನ್ನು ಕೈಯಿಂದ ಶಿರದ ಮೇಲೆತ್ತಿ ಹಿಡಿಯಲು ಬಯಸುತ್ತಾರೆ. ಅದರ ಮೇಲೆ ಕಾಲುಚಾಚಿ ಕುಳಿತಿದ್ದು ನನಗೆ ಹಿತಕರವೆನಿಸಲಿಲ್ಲ’ ಎಂದು ಹೇಳಿದ್ದರು. ಇವರು ಮಾತ್ರವಲ್ಲದೆ ಹಲವರು ಈ ಕುರಿತು ಬಹಳ ಟೀಕೆ ಮಾಡಿದ್ದೂ, ವಿಶ್ವಕಪ್ ಟ್ರೋಫಿಗೆ ಅಗೌರವ ನೀಡಲಾಗಿದೆ ಎಂದು ಹೇಳಲಾಗಿದೆ.

Leave A Reply

Your email address will not be published.