Drone Prathap: ಪ್ರತಾಪ್ ಮೇಲೆ ಇನ್ನೊಂದು ಗಂಭೀರ ಆರೋಪ, ಪ್ರತಾಪ್ ಹೇಳುತ್ತಿರುವುದು ಎಲ್ಲಾ ಸುಳ್ಳು.

ಪ್ರತಾಪ್ ಮೇಲೆ ಇನ್ನೊಂದು ಗಂಭೀರ ಆರೋಪ.

Dr Prayaga About Drone Prathap: ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಫಿಸಿಕಲ್ ಟಾಸ್ಕ್ ಮುಗಿದ ನಂತರ ಸ್ಪರ್ಧಿಗಳಿಗೆ ಇನ್ನೊಂದು ಅವಕಾಶವನ್ನು ಮಾಡಿಕೊಡಲಾಯಿತು ಅದೇನೆಂದರೆ ಸ್ಪರ್ಧಿಗಳು ತಮ್ಮ ಜೀವನದ ಮರೆಯಲಾರದ ನೋವಿನ ಸಂಗತಿಗಳನ್ನು ಮನಬಿಚ್ಚಿ ಮಾತನಾಡುವುದಾಗಿದೆ.

ಸ್ಪರ್ಧಿಗಳು ತಮ್ಮ ಜೀವನದ ನೋವಿನ ಮಾತುಗಳನ್ನು ಹೇಳಲು ಬಿಗ್ ಬಾಸ್ ಒಳ್ಳೆಯ ವೇದಿಕೆ ಕೊಟ್ಟಿರುವುದರಿಂದ ಪ್ರತಿಯೊಬ್ಬ ಸ್ಪರ್ಧಿಯು ಕೂಡ ತಮ್ಮ ಜೀವನದ ಕಹಿ ಕ್ಷಣಗಳನ್ನು ಹೇಳಿಕೊಂಡು ಕಣ್ಣೀರಿಟ್ಟರು. ಎಲ್ಲಾ ಸ್ಪರ್ಧಿಗಳ ಜೊತೆಗೆ ಡ್ರೋನ್ ಪ್ರತಾಪ್ (Drone Prathap) ತನ್ನ ನೋವಿನ ಸಂಗತಿಗಳನ್ನೆಲ್ಲಾ ಹಂಚಿಕೊಂಡಿದ್ದಾರೆ.

Drone Prathap Latest News Update
Image Credit: Instagram

ತನ್ನ ಕಷ್ಟ ಹಾಗು ಅವಮಾನಗಳನ್ನು ಹೇಳಿಕೊಂಡು ಕಣ್ಣೀರಾಕಿದ ಡ್ರೋನ್ ಪ್ರತಾಪ್

“ನನಗೆ ಕೋವಿಡ್ ಸೋಂಕು ತಗುಲಿತ್ತು. ಕ್ವಾರಂಟೈನ್ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆ ಬಳಿಕ ಜನ ಸುಳ್ಳು ಸುದ್ದಿ ಹಬ್ಬಿಸಿದರು. ನಾನು ಕ್ವಾರಂಟೈನ್ ಆಗಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋದ್ರು. ನನ್ನನ್ನು ಜೈಲಿನಲ್ಲಿ ಇರಿಸಿದರು. ಪ್ರತಾಪ್ ವಿರುದ್ಧ ಕಂಡಲ್ಲಿ ಗುಂಡು ಆದೇಶ ಇದೆ ಎಂದು ಸುದ್ದಿ ಹಬ್ಬಿಸಲಾಯಿತು. ಇವನು ಸುಳ್ಳ, ಕಳ್ಳ ಅಂತ ಊರಿನವರು ಹೇಳೋಕೆ ಶುರು ಮಾಡಿದರು. ನನಗೆ ಎಲ್ಲರೂ ಸಾಕಷ್ಟು ಹಿಂಸೆ ಕೊಟ್ಟರು. ತಂಗಿನ ಯಾರು ಮದುವೆ ಆಗ್ತಾರೆ ನೋಡ್ತೀವಿ, ನಿಮ್ಮಮ್ಮ ಹುಚ್ಚಿ ತರ ರಸ್ತೆಯಲ್ಲಿ ಅಲೆಯುವಂತೆ ಮಾಡ್ತೀವಿ ಅಂದ್ರು. ನನ್ನನ್ನು ಮಾನಸಿಕ ರೋಗಿ ಎಂದು ಬಿಂಬಿಸುವ ಹುನ್ನಾರ ನಡೆಯಿತು. ನನ್ನ ತಲೆಗೆ ಹೊಡೆದರು ಎಂದು ಪ್ರತಾಪ್ ಹೇಳಿದ್ದರು.

ಪ್ರತಾಪ್ ಹೇಳಿದ್ದೆಲ್ಲಾ ಸುಳ್ಳು

ಪ್ರತಾಪ್ ಬಿಗ್ ಮನೆಯಲ್ಲಿ ಹೇಳಿಕೊಂಡ ಎಲ್ಲಾ ವಿಷಯವು ಸುಳ್ಳು ಎಂದು ಬಿಬಿಎಂಪಿ ನೋಡಲ್ ಅಧಿಕಾರಿ ಡಾ. ಪ್ರಯಾಗ್ ಖಂಡಿಸಿದ್ದಾರೆ. ಡಾ. ಪ್ರಯಾಗ್ ಥರ್ಡ್ ಐ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. “ಡ್ರೋನ್ ಪ್ರತಾಪ್ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ. ಜೊತೆಗೆ ಆತನ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆತ ಹೇಳುವುದು ನಿಜವಾಗಿದ್ದರೆ 3 ವರ್ಷಗಳ ನಂತರ ಹೇಳುವ ಅವಶ್ಯಕತೆ ಇರಲಿಲ್ಲ.

ನಾವು ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದಾಗಲೇ ನನ್ನ ಮೇಲೆ ದೂರು ಕೊಡಬಹುದಿತ್ತು. ಒಂದು ವೇಳೆ ನಾನು ಹೊಡೆದಿದ್ದರೆ ಆತ ಪೊಲೀಸರಿಗೆ ಅಥವಾ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದಾಗಿತ್ತು” ಎಂದಿದ್ದಾರೆ.

“ನಾವು ಸರ್ಕಾರಿ ಅಧಿಕಾರಿಗಳಾಗಿ ನಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರೆ ನಮ್ಮ ತಪ್ಪಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಕೆಲಸವೇ ಹೋಗುತ್ತದೆ. ಸಾರ್ವಜನಿಕರು ನಮ್ಮ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಆದರೆ 3 ವರ್ಷಗಳ ನಂತರ ಪ್ರತಾಪ್ ಸುಳ್ಳು ಆರೋಪ ಮಾಡುತ್ತಿದ್ದಾನೆ ಇದು ನಿರಾಧಾರ. ಆತ ಬೇಕಿದ್ದರೆ ಸಾಬೀತು ಮಾಡಲಿ” ಎಂದಿದ್ದಾರೆ.

Dr Prayaga About Drone Prathap
Image Credit: Original Source

ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಂದರ್ಶನದಲ್ಲಿ ಭಾಗಿಯಾದ ಪ್ರತಾಪ್

“ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ಕೂತು ಸಂದರ್ಶನದಲ್ಲಿ ಮಾತನಾಡಿದ್ದ. ಆ ಸಮಯದಲ್ಲಿ ನಾವು ಆತನ ಬಗ್ಗೆ ಮಾಹಿತಿ ಕಲೆ ಹಾಕಿದೆವು. ಆತ ಹೇಳುವಂತೆ ಇಡೀ ಪೊಲೀಸ್ ಪಡೆ ಅವನನ್ನು ಸುತ್ತುವರೆದಿರಲಿಲ್ಲ. ಅದೆಲ್ಲ ಸುಳ್ಳುನಾನು ಆ ದೇಶಕ್ಕೆ ಹೋಗಿದ್ದೆ. ಅಲ್ಲಿ ಡ್ರೋನ್ ತಯಾರಿಸಿದ್ದೆ. ಆ ದೇಶದಲ್ಲಿ ಪ್ರಶಸ್ತಿ ಬಂತು ಅಂತೆಲ್ಲಾ ಹೇಳಿದ್ದ.

ನಾವು ವಿಚಾರಣೆ ವೇಳೆ ಅದರ ಸತ್ಯಾಸತ್ಯತೆ ತಿಳಿದುಕೊಂಡಿದ್ದೇವೆ. ಆಯಾ ದೇಶಗಳಿಂದಲೇ ಪ್ರತಾಪ್ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ನಮಗೆ ಮಾಹಿತಿ ಸಿಕ್ಕಿತ್ತು. ಆತ ಡಿಗ್ರಿ ಮಾಡಿರುವುದು ನನಗೆ ಅನುಮಾನ ಇದೆ. ಆತ ಹೇಳುತ್ತಿರುವುದೆಲ್ಲಾ ಸುಳ್ಳು.  ಪ್ರತಾಪ್ ತಂದೆಯವರ ಜೊತೆ ನಾನು ನಮ್ಮ ತಂಡ ಒಳ್ಳೆ ರೀತಿಯಲ್ಲೇ ನಡೆದುಕೊಂಡಿದ್ದೇವೆ.”

ನಾನು ಹೇಳಿದ್ದು ಸುಳ್ಳು ಎಂದು ಪ್ರತಾಪ್ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಒಪ್ಪಿಕೊಳ್ಳುವಂತೆ ನಾನು ಮಾಡ್ತೀನಿ

ಪ್ರತಾಪ್ ಹೇಳುವುದೆಲ್ಲಾ ಸುಳ್ಳು. ಆತ ಬರೀ ವಂಚಕ ಅಷ್ಟೆ. ಆತನ ವಿರುದ್ಧ ಯಾಕೆ ಕಂಡಲ್ಲಿ ಗುಂಡು ಆದೇಶ ಹೊರಡಿಸುತ್ತಾರೆ. ಪ್ರತಾಪ್ ತನ್ನದೇ ಭ್ರಮೆಯಲ್ಲಿ ಬದುಕುತ್ತಿದ್ದಾನೆ” “ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದರು ಅಂತಾನೆ. ಅದು ಬರೀ ಭಯೋತ್ಪಾದಕರ ವಿರುದ್ಧ ಕೊಡುವಂತಹ ಆದೇಶ. ಅದಕ್ಕೆ ಹೋಂ ಮಿನಿಸ್ಟರ್ ಅನುಮತಿ ಬೇಕು ಎಂದಿದ್ದಾರೆ.

ಪ್ರತಾಪ್ ಬಿಗ್‌ಬಾಸ್ ಶೋನಲ್ಲಿ ಹೇಳಿದ ಪ್ರತಿಯೊಂದು ಮಾತು ಸುಳ್ಳು. ಅದನ್ನು ಆತ ಒಪ್ಪಿಕೊಂಡರೆ ಸರಿ. ವೇದಿಕೆ ಸಿಕ್ತು, ಮೈಕ್ ಸಿಕ್ತು ಎಂದು ಮಾತನಾಡುವುದಲ್ಲ. ಅದೇ ಬಿಗ್‌ಬಾಸ್ ಶೋನಲ್ಲಿ ನಾನು ಹೇಳಿದ್ದು ಸುಳ್ಳು ಎಂದು ಪ್ರತಾಪ್ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಒಪ್ಪಿಕೊಳ್ಳುವಂತೆ ನಾನು ಮಾಡ್ತೀನಿ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ” ಎಂದು ಪ್ರಯಾಗ್ ತಿಳಿಸಿದ್ದಾರೆ.

Leave A Reply

Your email address will not be published.