Panic Button: ಇಂದಿನಿಂದ ಇಂತಹ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ. ದೇಶದಲ್ಲಿ ಜಾರಿಗೆ ಬಂತು ಹೊಸ ರೂಲ್ಸ್.

ವಾಹನಗಳಿಗೆ ಪ್ಯಾನಿಕ್ ಬಟನ್ ಹಾಕಿಸಲು ಎಷ್ಟು ಖರ್ಚಾಗುತ್ತದೆ.

Panic Button Compulsory For Vehicles: ಸಾರಿಗೆ ಇಲಾಖೆ ಕೆಲವು ನಿರ್ದಿಷ್ಟ ವಾಹನಗಳಿಗೆ ಕಡ್ಡಾಯವಾಗಿ ಪ್ಯಾನಿಕ್ ಬಟನ್ ಅಳವಡಿಸುವಂತೆ ಈಗಾಗಲೇ ಗಡುವನ್ನು ವಿಧಿಸಿರುವ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಈ ಪ್ಯಾನಿಕ್ ಬಟನ್ ಗಳು ತುರ್ತು ಸಮಯದಲ್ಲಿ ಹಾಗು ಎಚ್ಚರಿಕೆಯ ವಿಷಯವಾಗಿ ಬಹಳ ಮುಖ್ಯ ಆಗಿದ್ದು, ವಾಹನ ಮಾಲೀಕರು ಕಡ್ಡಾಯವಾಗಿ ಈ ಪ್ಯಾನಿಕ್ ಬಟನ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸತಕ್ಕದ್ದು ಹಾಗು ಈ ಪ್ಯಾನಿಕ್ ಬಟನ್ ಅಳವಡಿಕೆಗೆ ಸ್ವತಃ ವಾಹನ ಮಾಲೀಕರೇ ಪಾವತಿಸತಕ್ಕದ್ದಾಗಿದೆ.

ಹಾಗಾಗಿ ಸುರಕ್ಷತೆಯ ದ್ರಷ್ಟಿಯಿಂದರಾಷ್ಟ್ರೀಯ ಪರವಾನಿಗೆ ಹೊಂದಿರುವ ಎಲ್ಲಾ ಸಾರ್ವಜನಿಕ ಸೇವೆಗಳು ಮತ್ತು ಸರಕುಗಳ ವಾಹನಗಳಲ್ಲಿ ತುರ್ತು ಪ್ಯಾನಿಕ್ ಬಟನ್‌ ಕಡ್ಡಾಯವಾಗಿದೆ. ಹಾಗಾದರೆ ಯಾವ ವಾಹನಗಳಿಗೆ ಪ್ಯಾನಿಕ್ ಬಟನ್ ಕಡ್ಡಾಯ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ

Panic Button Compulsory For Vehicles
Image Credit: Deccanherald

ಪ್ಯಾನಿಕ್ ಬಟನ್‌ ಹೊಂದಿದ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಾಧನಗಳನ್ನು ಪಡೆಯಬೇಕು

ರಾಷ್ಟ್ರೀಯ ಪರವಾನಿಗೆ ಹೊಂದಿರುವ ಎಲ್ಲಾ ಸಾರ್ವಜನಿಕ ಸೇವೆಗಳು ಮತ್ತು ಸರಕುಗಳ ವಾಹನಗಳಲ್ಲಿ ವಾಹನ ಟ್ರ್ಯಾಕಿಂಗ್ ಸಾಧನಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಒಂದು ವರ್ಷದ ಗಡುವನ್ನು ನಿಗದಿಪಡಿಸಿದೆ. ಈ ವಾಹನಗಳು ಡಿಸೆಂಬರ್ 1, 2023 ಮತ್ತು ನವೆಂಬರ್ 30, 2024 ರ ನಡುವೆ ಅರ್ಹ ಕಂಪನಿಗಳಿಂದ ತುರ್ತು ಪ್ಯಾನಿಕ್ ಬಟನ್‌ಗಳನ್ನು ಹೊಂದಿರುವ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (VLT) ಸಾಧನಗಳನ್ನು ಪಡೆಯಬೇಕು.

Panic Button Latest Update
Image Credit: Deccanherald

ಪ್ಯಾನಿಕ್ ಬಟನ್‌ ಅಳವಡಿಕೆಗೆ ತಗಲುವ ಖರ್ಚು

ವಾಹನಗಳಿಗೆ ಪ್ಯಾನಿಕ್ ಬಟನ್‌ ಅಳವಡಿಕೆಗೆ ತಗಲುವ ಶುಲ್ಕ ರೂ 7,599 ಆಗಿರುತ್ತದೆ (GST ಅಗತ್ಯವಿದ್ದರೆ) . ಅನುಸ್ಥಾಪನೆಯ ನಂತರ, ವಾಹನಗಳನ್ನು ತಮ್ಮ ಗೊತ್ತುಪಡಿಸಿದ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಕೊಂಡೊಯ್ಯಬೇಕು ಮತ್ತು ಅವುಗಳ ಪರವಾನಗಿಗಳನ್ನು ನವೀಕರಿಸಬೇಕು ಎಂದು ಇಲಾಖೆ ಹೇಳಿದೆ. ಹಾಗಾಗಿ ಎಲ್ಲಾ ವಾಹನ ಮಾಲೀಕರು ಸುರಕ್ಷತೆಯ ದ್ರಷ್ಟಿಯಿಂದ ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಪ್ಯಾನಿಕ್ ಬಟನ್ ಅನ್ನು ಅಳವಡಿಸಿಕೊಳ್ಳಿ.

Leave A Reply

Your email address will not be published.