Exam Fees: PUC ಓದುತ್ತಿರುವ ವಿದ್ಯಾರ್ಥಿಗಳು ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ, ಸರ್ಕಾರದ ಇನ್ನೊಂದು ಆದೇಶ.

PUC ಓದುತ್ತಿರುವ ವಿದ್ಯಾರ್ಥಿಗಳು ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ.

PUC Annual Exam -1 Fees Due Date Extended: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಈ ಮಾಹಿತಿಯನ್ನು ಸರಿಯಾಗಿ ಗಮನಿಸಿ ಯಾಕೆಂದರೆ ಇದು ನಿಮ್ಮ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಆಗಿದೆ. ವಾರ್ಷಿಕ ಪರೀಕ್ಷಾ ಶುಲ್ಕಕ್ಕೆ ಸಂಬಂಧಿಸಿದಂತೆ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಮಾರ್ಚ್ 2024 ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ 01-12-2023 ರಿಂದ 12-12-2023ರವರೆಗೆ ಅವಕಾಶ ನೀಡಲಾಗಿದೆ.ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ಮಾಹಿತಿಯನ್ನು PU Exam Portal Login ನಲ್ಲಿ Update ಮಾಡಲು ಕೊನೆಯ ದಿನಾಂಕ 13-12-2023 ಆಗಿದೆ.

PUC Annual Exam
Image Credit: DNA India

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಶುಲ್ಕ ಮಾಹಿತಿ

2024 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಕ್ಕೆ ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಉಲ್ಲೇಖ 03 ರಲ್ಲಿ ದಿನಾಂಕ 27-11-2023 ರವರೆಗೆ ರೂ 500+700=1200/- ರೂಗಳ ದಂಡಶುಲ್ಕದೊಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಪೋಷಕರು ಹಾಗೂ ವಿದ್ಯಾರ್ಥಿಗಳ ದೂರವಾಣಿ ಕರೆಗಳ ಮೇರೆಗೆ ಪರೀಕ್ಷೆಗೆ ಶುಲ್ಕ ಪಾವತಿಸುವ ದಿನಾಂಕವನ್ನು ಈ ಕೆಳಕಂಡಂತೆ ವಿಸ್ತರಿಸಿ ಆದೇಶಿಸಲಾಗಿದೆ.

ಶುಲ್ಕದ ಜೊತೆಗೆ ದಂಡಶುಲ್ಕ 500/- ರೂಗಳು ಮತ್ತು 700/- ಹಾಗೂ ವಿಶೇಷ 1320/- ರೂ.ಗಳು ಆಗಿರುತ್ತದೆ. ವಿದ್ಯಾರ್ಥಿಗಳು ಕಾಲೇಜಿಗೆ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ಶುಲ್ಕದ ಜೊತೆಗೆ ದಂಡ ಶುಲ್ಕ ರೂ.500 ಮತ್ತು 700 ರೂ ಹಾಗೂ ವಿಶೇಷ ದಂಡ ಶುಲ್ಕ ರೂ.1,320 ರೂ. ಪಾವತಿಸತಕ್ಕದ್ದು.

PUC Annual Exam -1 Fees Due Date Extended Update
Image Credit: Hindustantimes

Exam Fees ಪಾವತಿ ಕುರಿತು ಮುಂದಿನ ಹಂತದ ಪ್ರಕ್ರಿಯೆ

ಕಾಲೇಜಿನವರು ಅರ್ಜಿಗಳನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾದ ದಿನಾಂಕ15-12-2023 ಆಗಿದ್ದು, ಜಿಲ್ಲಾ ಉಪನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಅರ್ಜಿಗಳನ್ನು ಮಂಡಲಿಯ ಜಾಲತಾಣದ PU Exam Portal Login ನಲ್ಲಿ Update ಮಾಡಿರುವುದನ್ನು ಖಾತ್ರಿಪಡಿಸಿಕೊಂಡು, ಪ್ರಾಂಶುಪಾಲರಿಂದ Update ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಪಡೆದ ನಂತರ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಶುಲ್ಕ ಪಾವತಿಸಿರುವ ಮೂಲ ಚಲನ್ ಹಾಗೂ ಚೆಕ್ಲಿಸ್ಟ್ನ್ನು ಖುದ್ದಾಗಿ ಕೇಂದ್ರ ಕಛೇರಿಗೆ ದಿನಾಂಕ: 18-12-2023 ರಂದು ಸಲ್ಲಿಸಲು ಸೂಚಿಸಲಾಗಿದೆ ಎನ್ನಲಾಗಿದೆ.

Leave A Reply

Your email address will not be published.