Google: ಬಡ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಬೆಲೆಗೆ ಲ್ಯಾಪ್ ಟಾಪ್, ಭಾರತದಲ್ಲಿ ಕ್ರೋಮ್ ಬುಕ್ ತಯಾರಿಕೆ.
ಗೂಗಲ್ ಕೈ ಗೆಟಕುವ ಬೆಲೆ ಹಾಗೂ ಸುರಕ್ಷಿತ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆಯನ್ನು ಆರಂಭಿಸಿದೆ.
Chromebook Laptop Manufacturing in India: ಗೂಗಲ್ (Google) ದಿನದಿಂದ ದಿನಕ್ಕೆ ಬೆಳವಣಿಗೆಯನ್ನು ಕಾಣುತ್ತಿದೆ. ಹಾಗೆಯೆ ಗೂಗಲ್ ಪರ್ಸನಲ್ ಕಂಪ್ಯೂಟರ್ ಉತ್ಪಾದನೆಗಳ ವಿಚಾರದಲ್ಲಿ ದೈತ್ಯರಾಗಿರುವ ಎಚ್‌ಪಿ(HP) ಕಂಪನಿಯ ಜೊತೆ ಸೇರಿ ತನ್ನ ಮೇಡ್ ಇನ್ ಇಂಡಿಯಾ ಕ್ರೋಮ್‌ಬುಕ್ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಆರಂಭಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೇಕ್ ಇಂಡಿಯಾ ಕಾರ್ಯಕ್ರಮದ ನಿಟ್ಟಿನಲ್ಲಿ ದೊಡ್ಡ ಬೂಸ್ಟ್ ಕೊಡುವಂಥ ವಿಚಾರವಾಗಿದೆ.

ಭಾರತದಲ್ಲಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆ
Google ಈಗ ಹೊಸದಾಗಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಸಲು ಮುಂದಾಗಿದೆ. ಈ ಲ್ಯಾಪ್‌ಟಾಪ್ ಅನೇಕ ವಿಶೇಷತೆಯನ್ನು ಹೊಂದುವುದಾಗಿದ್ದು ವಿದ್ಯಾರ್ಥಿಗಳು ಹಾಗು ಆಫೀಸ್ ಬಳಕೆಗೆ ಎಲ್ಲದಕ್ಕೂ ಬಳಸಬಹುದಾಗಿದೆ.
ಗೂಗಲ್ CEO ಭಾರತೀಯ ಮೂಲದ ಸುಂದರ್ ಪಿಚೈ ತಮ್ಮ ಎಕ್ಸ್‌ನಲ್ಲಿ ಭಾರತದಲ್ಲಿ ಕ್ರೋಮ್‌ಬುಕ್ಸ್ ತಯಾರಿಸಲು ನಾವು ಎಚ್‌ಪಿ ಜೊತೆ ಪಾಲುದಾರರಾಗಿದ್ದೇವೆ. ಇವುಗಳು ಭಾರತದಲ್ಲಿ ತಯಾರಿಸಲಾದ ಮೊದಲ ಕ್ರೋಮ್‌ಬುಕ್ಸ್ ಆಗಿದ್ದು, ಭಾರತೀಯ ವಿದ್ಯಾರ್ಥಿಗಳು ಕೈಗೆಟುಕುವ ಮತ್ತು ಸುರಕ್ಷಿತ ಕಂಪ್ಯೂಟರ್ ಹೊಂದಲು ಇದು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.