Tata 3.0: ಈ ಟಾಟಾ ಕಾರಿಗೆ ಒಮ್ಮೆ ಚಾರ್ಜ್ ಮಾಡಿದರೆ 456 Km ರೇಂಜ್, ಒಂದೇ ದಿನದಲ್ಲಿ 50000 ಬುಕಿಂಗ್.

ಟಾಟಾದವರ ಹೊಸ ಕಾರು, ವಿಶೇಷ ವೈಶಿಷ್ಟತೆಗಳೊಂದಿಗೆ ಮಾರುಕಟ್ಟೆಗೆ.

Tata Nexonc Ev 3.0 2023: Tata Motors ಕಂಪನಿಯ ಹೊಸ ಕಾರು ಮಾರುಕಟ್ಟೆಗೆ ಬಂದಿದ್ದು, ಮಂಗಳೂರಿನ ಅಟೊಮ್ಯಾಟ್ರಿಕ್ಸ್‌ ಮಳಿಗೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನೂತನ ವಾಹನಗಳನ್ನು ಟಾಟಾ (Tata Motors) ಗ್ರಾಹಕರಾದ ವ್ಯಾಪಾರಿ ವರದರಾಜ ಶೆಣೈ, ಕಂಟೆಂಟ್‌ ಕ್ರಿಯೇಟರ್‌ಗಳಾದ ಶರಣ್‌ ಚಿಲಿಂಬಿ, ಪ್ರಿಯಾ ಮೋನಿಕಾ ಡಿ’ಸೋಜ ಅವರು ಬಿಡುಗಡೆಗೊಳಿಸಿದರು.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಟಾಟಾ ಕಂಪನಿಯ ಅಧಿಕೃತ ಡೀಲರ್‌ ಆಗಿರುವ ಅಟೋಮ್ಯಾಟ್ರಿಕ್ಸ್‌ ಮಂಗಳೂರು ಹಾಗೂ ಉಡುಪಿ ಮಾರುಕಟ್ಟೆಗೆ ನೂತನ ಟಾಟಾ ನೆಕ್ಸಾನ್‌ ಹಾಗೂ ನೆಕ್ಸಾನ್‌ ಇವಿ 3.0 ವಾಹನಗಳನ್ನು ಬಿಡುಗಡೆ ಮಾಡಿದೆ.

Tata Nexon feature
Image Credit: Autocarindia

TATA NEXON ಕಾರಿನ ವೈಶಿಷ್ಟತೆಗಳು

2017ರಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್‌ 2020ರಲ್ಲಿ ಸುಧಾರಣೆ ಕಂಡಿತ್ತು. ಪ್ರಸ್ತುತ ದೇಶದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಎಸ್‌ಯುವಿ ಎನಿಸಿರುವ ನೆಕ್ಸಾನ್‌ ಈಗ ಆಲ್‌ ನ್ಯೂ ನೆಕ್ಸಾನ್‌ ಮತ್ತು ನೆಕ್ಸಾನ್‌ ಇವಿ ಸುಧಾರಿತ ಆವೃತ್ತಿಗಳೊಂದಿಗೆ ಉನ್ನತ ವೈಶಿಷ್ಟ್ಯ ಗಳು ಹಾಗೂ ಪರಿಚಯಾತ್ಮಕ ಬೆಲೆಯೊಂದಿಗೆ ಮಾರುಕಟ್ಟೆಗೆ ಈ ಕಾರು ಬಂದಿದೆ.

ಇಂಪಾಕ್ಟ್ 3.0 ವಿನ್ಯಾಸವು ಸಮಕಾಲೀನ ವಿನ್ಯಾಸ, ಆಕರ್ಷಕ ಒಳಾಂಗಣ ಹೊಂದಿದ್ದು ಗಮನಸೆಳೆಯುವ ಮುಂಭಾಗದ ಗ್ರಿಲ್‌, ಬೈ ಎಲ್‌ಇಡಿ ಹೆಡ್‌ಲೈಟ್‌, ಆಲಾಯ್‌ ವೀಲ್‌ನೊಂದಿಗೆ ಸಂಪೂರ್ಣ ನವೀಕರಿಸಲಾಗಿರುವ ಎಕ್ಸ್‌ ಫ್ಯಾಕ್ಟರ್‌ ಶೈಲಿಯ ಹಿಂಭಾಗ, ಸ್ವಾಗತ ಹಾಗೂ ವಿದಾಯ ಕೋರುವ ವಿನ್ಯಾಸದ ಭಾಷೆಯನ್ನೂ ಹೊಂದಿದೆ.

10.25 ಇಂಚ್‌ ಅಲ್ಟಾ ಎಚ್‌ಡಿ ಟಚ್‌ ಸ್ಕ್ರೀನ್ ಸಿನೆಮಾಟಿಕ್‌ ಇನ್ಫೊಟೈನ್‌ಮೆಂಟ್‌ ವ್ಯವಸ್ಥೆ, ಸನ್‌ರೂಫ್‌, ವೈರ್‌ಲೆಸ್‌ ಚಾರ್ಜರ್‌, 360 ಡಿಗ್ರಿ ಕ್ಯಾಮೆರಾ ಸಿಸ್ಟಂ ಹೊಂದಿದೆ. 1.2 ಲೀಟರ್‌ ಟಬೋ ಚಾರ್ಜ್‌ಡ್‌ ಪೆಟ್ರೋಲ್‌ ಇಂಜಿನ್‌ 6 ಸ್ಪೀಡ್‌ನ‌ ಮ್ಯಾನ್ಯುವಲ್‌ ಅಥವಾ 7 ಸ್ಪೀಡ್‌ನ‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಹೊಂದಿದೆ. 6 ಏರ್‌ಬ್ಯಾಗ್‌, ಎಬಿಎಸ್‌ ವಿತ್‌ ಇಬಿಡಿ, ಇಎಸ್‌ಪಿ ಹೊಂದಿದ್ದು ಸುರಕ್ಷಿತವಾಗಿದೆ.

Tata Nexon 2023
Image Credit: Carwale

TATA NEXON ಕಾರಿನ ಮೈಲೇಜ್ ಹಾಗು ದರ

ಜೆನ್‌-2 ಮೋಟಾರ್‌ನೊಂದಿಗೆ ಬಂದಿರುವ ನೆಕ್ಸಾನ್‌ ಇವಿ ಒಂದು ಚಾರ್ಜ್‌ನಲ್ಲಿ 456 ಕಿ.ಮೀ ವರೆಗೂ ಸಂಚರಿಸುವ ಕ್ಷಮತೆ ಹೊಂದಿದ್ದು ವೆಹಿಕಲ್‌-ಟು-ವೆಹಿಕಲ್‌ ಚಾರ್ಜಿಂಗ್‌, ವಿ2ಎಲ್‌ ಟೆಕ್ನಾಲಜಿ, ಆರ್ಕೇಡ್‌ ಇವಿ ಆಯಪ್‌ ಸುಟ್‌, ಪ್ಯಾಡಲ್‌ ಶಿಫ್ಟರ್, ಮಲ್ಟಿ ಡ್ರೈವ್‌ ಮೋಡ್‌ಗಳನ್ನು ಹೊಂದಿದೆ. ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಲಿಕ್ವಿಡ್‌ ಕೂಲ್ಡ್‌ ಬ್ಯಾಟರಿ ಪ್ಯಾಕ್‌ ಇದರ ವೈಶಿಷ್ಟ್ಯ.ಈ ಕಾರಿನ ಎಕ್ಸ್‌-ಶೋರೂಂ ದರ 8.09 ಲಕ್ಷ ಆಗಿರುತ್ತದೆ.

Leave A Reply

Your email address will not be published.