iPhone 15: ಬಿಡುಗಡೆಯೂ ಮುನ್ನವೇ ಐಫೋನ್ 15 ಬೆಲೆ ಮತ್ತು ಫೀಚರ್ ಲೀಕ್, ಈ ಮೊಬೈಲ್ ಇತಿಹಾಸ ಸೃಷ್ಟಿಸಲಿದೆ.
ಬಿಡುಗಡೆಗೂ ಮುನ್ನವೇ ಐಫೋನ್ 15 ನ ಮಾಹಿತಿ ಸೋರಿಕೆ
iPhone 15 Feature Leak: ದೇಶದ ದುಬಾರಿ ಸ್ಮಾರ್ಟ್ ಫೋನ್ ಬ್ರಾಂಡ್ ಎಂದರೆ ಅದು ಐಫೋನ್. ಐಫೋನ್ (iPhone) ದುಬಾರಿ ಆದರೂ ಜನರು ಅದರ ಮೇಲೆ ಹೆಚ್ಚಾಗಿ ಒಲವು ತೋರುತ್ತಾರೆ. ಇದೀಗ Apple ಕಂಪನಿ ನೂತನ ಮಾದರಿಯ ಐಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನೆಡೆಸುತ್ತಿದ್ದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ.

ಐಫೋನ್ 15 ನ ಮಾಹಿತಿ ಸೋರಿಕೆ
ಐಫೋನ್ 15 (iPhone 15)ಬಿಡುಗಡೆಗೂ ಮುನ್ನ ಬಾರಿ ಸದ್ದು ಮಾಡುತ್ತಿದೆ. ಇದೀಗ ಐಫೋನ್ 15 ನ ಫೀಚರ್ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಬಿಡುಗಡೆಗೂ ಮುನ್ನ ಈ ಐಫೋನ್ ನ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ಜನರಿಗೆ ಇದರ ಮೇಲಿನ ಒಲವು ಹೆಚ್ಚಾಗಿದೆ. Iphone 15 ನ ಬಿಡುಗಡೆಯ ದಿನಾಂಕವನ್ನ ಕಂಪನಿ ಸದ್ಯದಲ್ಲೇ ಬಹಿರಂಗ ಪಡಿಸಲಿದೆ. ಇದರಲ್ಲಿ ನಾವು ಐಫೋನ್ 15, ಐಫೋನ್ 15 ಪ್ರೊ, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಯ ಫೋನ್ ಅನ್ನು ಕಾಣಬಹುದಾಗಿದೆ .
ಐಫೋನ್ 15 ಫೀಚರ್
iPhone 15 ಡ್ಯುಯೆಲ್ ಕ್ಯಾಮರವನ್ನು ಪಡೆದಿದೆ. ಹಾಗೇ 6 .1 ಇಂಚಿನ XDR ಡಿಸ್ ಪ್ಲೇ ಅನ್ನು ಹೊಂದಿದೆ. ಐಫೋನ್ 15 ಐಫೋನ್ 14 ನ ಮಾದರಿಯನ್ನು ಹೊಲಲಿದೆ. ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಗಳು ಬಯೋನಿಕ್ A17 ಪ್ರೊಸೆಸರ್ ನಲ್ಲಿ ಬರಲಿದೆ.

ಐಫೋನ್ 15 ಬೆಲೆ ಹಾಗೂ ಬ್ಯಾಟರಿ ಸಾಮರ್ಥ್ಯ
ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ. ಐಫೋನ್ 15 3877mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿ ಮೂಲಕ ತಿಳಿದುಬಂದಿದೆ. ಐಫೋನ್ 15 ಗೆ ಸರಿಸುಮಾರು 79,900 ರೂ ಆರಂಭಿಕ ಬೆಲೆಯನ್ನು ಅಂದಾಜಿಸಲಾಗಿದೆ. ಇನ್ನು ಕಂಪನಿಯು ಇದರ ಬೆಲೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ. ಸೆಪ್ಟೆಂಬರ್ ಅಂತ್ಯದೊಳಗೆ ಐಫೋನ್ 15 ಅನ್ನು ಕಂಪನಿಯು ಬಹಿರಂಗಪಡಿಸಲಿದೆ ಎಂದು ವರದಿಯಾಗಿದೆ.