Bajaj Nano: ಬೈಕಿಗಿಂತ ಹೆಚ್ಚು ಮೈಲೇಜ್ ಕೊಡುವ ಈ ಬಜಾಜ್ ಕಾರನ್ನ ಐಫೋನ್ ಬೆಲೆಯಲ್ಲಿ ಖರೀದಿ ಮಾಡಿ.
ಬಜಾಜ್ ನ ನ್ಯಾನೋ ಕಾರು ಐಫೋನ್ ಬೆಲೆಯಲ್ಲಿ ಬಿಡುಗಡೆಯಾಗಲಿದ್ದು, ಬೈಕ್ ಗಿಂತಲೂ ಹೆಚ್ಚು ಮೈಲೇಜ್ ನೀಡಲಿದೆ.
Bajaj Qute Car: ಬಜಾಜ್ ನ ನ್ಯಾನೋ (Bajaj Nano) ಕಾರು ಐಫೋನ್‌ನ ಬೆಲೆಯಲ್ಲಿ ಬಿಡುಗಡೆಯಾಗಲಿದೆ, ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಈ ಕಾರು ಬೈಕ್‌ಗಿಂತ ಹೆಚ್ಚಿನ ಮೈಲೇಜ್ ನೀಡಲಿದೆ. ನಿಮಗೆಲ್ಲ ತಿಳಿದಿರುವಂತೆ ಟಾಟಾ ನ್ಯಾನೋ ದೇಶದ ಅತ್ಯಂತ ಅಗ್ಗದ ಕಾರು.
ಇದನ್ನು ಗಮನದಲ್ಲಿಟ್ಟುಕೊಂಡು ಬಜಾಜ್ ಭರ್ಜರಿ ನ್ಯಾನೋ ಕಾರನ್ನು ತರುತ್ತಿದೆ. ಈ ಕಾರಿಗೆ ಬಜಾಜ್ ಕ್ಯೂಟ್(Bajaj Qute) ಎಂದು ಹೆಸರಿಸಲಾಗಿದೆ. ಬಜಾಜ್ 2018 ರಲ್ಲಿ ಈ ಕಾರನ್ನು ಬಿಡುಗಡೆ ಮಾಡಿತ್ತು. ಈಗ ಅದನ್ನು ಖಾಸಗಿಯಾಗಿ ಪ್ರಾರಂಭಿಸಲು ಹೊರಟಿದೆ.

ಹೊಸ ಬಜಾಜ್ ಕ್ಯೂಟ್ (Bajaj Qute) ಎಂಜಿನ್ ಸಾಮರ್ಥ್ಯ ಹಾಗು ಗರಿಷ್ಠ ಮೈಲೇಜ್
ಬಜಾಜ್ ಕ್ಯೂಟ್ ಕಾರಿನಲ್ಲಿ 216cc ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಕಾಣಬಹುದಾಗಿದ್ದು ಹಾಗು 12bhp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಕಾರು ರಸ್ತೆಗಳಲ್ಲಿ ಗಂಟೆಗೆ 70 ರಿಂದ 80 ಕಿಮೀ ವೇಗದಲ್ಲಿ ಓಡಲು ಸಾಧ್ಯವಾಗುತ್ತದೆ. ಪೆಟ್ರೋಲ್ ಜೊತೆಗೆ CNG ಮತ್ತು LPG ವೇರಿಯಂಟ್‌ಗಳನ್ನು ಇದರಲ್ಲಿ ನೀಡಲಾಗುವುದು. ಈ ಕಾರು 36 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಸ ಬಜಾಜ್ ಕ್ಯೂಟ್ (Bajaj Qute) ನಲ್ಲಿ ವಿಶೇಷತೆ ಏನು
ಹೊಸ ಬಜಾಜ್ ಕ್ಯೂಟ್‌ನಲ್ಲಿ 4 ಜನರು ಕುಳಿತು ಆರಾಮವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ಯಾವುದೇ ಸಮಸ್ಯೆ ಎದುರಾಗದಂತೆ ಎಂಜಿನ್ ಜೊತೆಗೆ ಸಾಕಷ್ಟು ಜಾಗವನ್ನು ನೀಡಲಾಗಿದೆ. ಎಸಿ, ಏರ್‌ಬ್ಯಾಗ್, ಡಿಸ್ಕ್ ಬ್ರೇಕ್ ಮತ್ತು ಪವರ್ ಸ್ಟೀರಿಂಗ್‌ನಂತಹ ವೈಶಿಷ್ಟ್ಯಗಳು ಸಹ ಇದರಲ್ಲಿ ಲಭ್ಯವಿದೆ. ಅದರಲ್ಲಿ ಸ್ಲೈಡಿಂಗ್ ವಿಂಡೋಗಳು ಮತ್ತು ಮ್ಯಾನ್ಯುವಲ್ ವಿಂಡೋಗಳು ಲಭ್ಯವಿರುತ್ತವೆ .

ಹೊಸ ಬಜಾಜ್ ಕ್ಯೂಟ್ (Bajaj Qute) ಬೆಲೆ
ಹೊಸ ಬಜಾಜ್ ಕ್ಯೂಟ್ ಕಾರನ್ನು ಕ್ವಾಡ್ರಿಸೈಕಲ್ ವಿಭಾಗದಲ್ಲಿ ಇರಿಸಲಾಗಿದೆ ಮತ್ತು ಈ ಕಾರಿನ ಬೆಲೆ ಸುಮಾರು 2.48 ಲಕ್ಷ ರೂಪಾಯಿಗಳಾಗಲಿದ್ದು. ಈ ಕಾರು ಎನ್‌ಸಿಎಟಿ ಯಿಂದ ಅನುಮೋದನೆ ಪಡೆದಿದೆ.