Sim Card: ಹೊಸ ಸಿಮ್ ಖರೀದಿಸುವವರಿಗೆ ಇಂದಿನಿಂದ ಹೊಸ ನಿಯಮ, ಕೇಂದ್ರ ಸರ್ಕಾರದ ಘೋಷಣೆ.
ಸಿಮ್ ಕಾರ್ಡ್ ಖರೀದಿ ಹಾಗೂ ಮಾರಾಟದಲ್ಲಿ ಹೊಸ ನಿಯಮ ಜಾರಿಗೊಳಿಸಲಾಗಿದೆ.
Sim Card KYC Update: ಮೊಬೈಲ್ ಖರೀದಿ ಮಾಡುವುದರ ಜೊತೆಗೆ ಮೊಬೈಲ್ ಗೆ ಸಿಮ್ ಕಾರ್ಡ್ ಖರೀದಿ ಕೊಡ ಅಷ್ಟೇ ಮುಖ್ಯ. ಕೆಲವರು ಒಂದು ಮೊಬೈಲ್ ಉಪಯೋಗಿಸುತ್ತಿದ್ದರೆ ಹಲವಾರು ಸಿಮ್ ಕಾರ್ಡ್ ಅನ್ನು ಇಟ್ಟುಕೊಂಡಿರುತ್ತಾರೆ. ಭಾರತದಲ್ಲಿ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ರೀತಿಯಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಸರಕಾರ ಹೊಂದಿದೆ.
ಸಿಮ್ ಕಾರ್ಡ್‌ಗಳನ್ನು ಹೇಗೆ ಮಾರಬಹುದು ಮತ್ತು ಬಳಸಬಹುದು ಎಂಬುದನ್ನು ಟೆಲಿಕಾಂ ಇಲಾಖೆ (Department of Telecom) ನಿರ್ಧಾರ ಮಾಡುತ್ತದೆ. ಅದರಂತೆ ಸಿಮ್ ಕಾರ್ಡ್ ಖರೀದಿ ಹಾಗೂ ಸಕ್ರಿಯಗೊಳಿಸಿಕೊಳ್ಳುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ ಹೊಸ ನಿಯಮಗಳನ್ನು ಹೊರತಂದಿದೆ.

ಸಿಮ್ ಕಾರ್ಡ್ ಖರೀದಿ ಮಾಡುವ ವಿಧಾನ ಹೇಗೆ…?
ಸಿಮ್ ಕಾರ್ಡ್ ಖರೀದಿಯ ಬಗ್ಗೆ ಹೊಸ ನಿಯಮ ಜಾರಿಗೊಳಿಸಿದ್ದು, ಹೊರಡಿಸಲಾದ ಎರಡು ನಿರ್ದೇಶನಗಳಲ್ಲಿ ಒಂದು ಸಿಮ್ ಬಳಕೆದಾರರಿಗೆ ಸಂಬಂಧಿಸಿ್ದರೆ ಇನ್ನೊಂದು ಏರ್‌ಟೆಲ್ ಮತ್ತು ಜಿಯೋದಂತಹ ಟೆಲಿಕಾಂ ಕಂಪನಿಗಳಿಗೆ ಸಂಬಂಧಿಸಿದೆ. ಭಾರತದಲ್ಲಿ ಸಿಮ್ ಕಾರ್ಡ್‌ಗಳನ್ನು ಹೇಗೆ ಮಾರಾಟ ಮಾಡಲಾಗುತ್ತದೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಲು ಆಶಿಸುತ್ತಿರುವ ಟೆಲಿಕಾಂ ಕಂಪನಿಗಳಿಗೆ ಇದು ಎರಡನೇ ನಿರ್ದೇಶನವಾಗಿದೆ.
ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ KYC ಅನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಏರ್‌ಟೆಲ್ ಮತ್ತು ಜಿಯೋದಂತಹ ಟೆಲಿಕಾಂ ಕಂಪನಿಗಳು ತಮ್ಮ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಸಂಪೂರ್ಣ KYC ಅನ್ನು ಮಾಡಬೇಕು ಎಂದು DoT ಉಲ್ಲೇಖಿಸಿದೆ.

ಸಿಮ್ ಖರೀದಿ ಮಾಡುವವರಿಗೆ ಕಟ್ಟು ನಿಟ್ಟಿನ ಕ್ರಮ
ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರಿಗೂ ನಿಯಮಗಳನ್ನು ಮಾರ್ಪಡಿಸಲಾಗಿದೆ. KYC ಪ್ರಕ್ರಿಯೆಯೊಂದಿಗೆ Sim Purchase ಮಾಡಿದರೂ ಹೊಸ ನಿಯಮಗಳ ಪ್ರಕಾರ ಅಸ್ತಿತ್ವದಲ್ಲಿರುವ ಕಾರ್ಡ್ ಹಾನಿ ಅಥವಾ ಕಳೆದುಹೋದ ಸಿಮ್ ಕಾರ್ಡ್ ಅನ್ನು ಮರು ಪಡೆಯಲು ಮತ್ತೆ ಹೊಸ ರೀತಿಯ KYC ಅಗತ್ಯ ಇದೆ ಎಂದು ತಿಳಿಸಲಾಗಿದೆ.
ಸ್ಪ್ಯಾಮ್ ಸಂದೇಶ ಕಳುಹಿಸುವಿಕೆ ಮತ್ತು ಸೈಬರ್ ವಂಚನೆಗಳನ್ನು ಪರಿಶೀಲಿಸಲು ಈ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ. ಹಾಗೆಯೆ ಹೆಚ್ಚಿನ ಸಿಮ್ ಕಾರ್ಡ್ ಖರೀದಿಯನ್ನು ನಿಲ್ಲಿಸುವ ಗುರಿಯನ್ನು ಹೊಂದಿವೆ.

ನಿಯಮ ಉಲ್ಲಂಘನೆಗೆ 10 ಲಕ್ಷ ದಂಡ
ಅಕ್ಟೋಬರ್ 1, 2023 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಸೆಪ್ಟೆಂಬರ್ 30, 2024 ರೊಳಗೆ ಹೊಸ ನಿಯಮಗಳ ಪ್ರಕಾರ ತಮ್ಮ KYC ಅನ್ನು ಮಾಡಿಸಬೇಕು ಎಂದು ತಿಳಿಸಲಾಗಿದೆ. ಸರ್ಕಾರ ಕಟ್ಟು ನಿಟ್ಟಿನ ಕ್ರಮದೊಂದಿಗೆ ನಿಯಮ ಜಾರಿಗೆ ತಂದಿದ್ದು ಪಾಲನೆ ಮಾಡದೇ ಇದ್ದಲ್ಲಿ ಪ್ರತಿ ಸಿಮ್ ಮಾರಾಟ ಮಾಡುವ ಕಚೇರಿಗೆ ಅಥವಾ ಶಾಪ್ ಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂಬ ಗಂಭೀರ ಎಚ್ಚರಿಕೆ ನೀಡಲಾಗಿದೆ.
Airtel ಮತ್ತು ಜಿಯೋದಂತಹ ಕಂಪನಿಗಳು ತಮ್ಮ ಸಿಮ್ ಕಾರ್ಡ್ ಗಳನ್ನು ಯಾರು ಮತ್ತು ಯಾವ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದರ ಮೇಲೆ ಹದ್ದಿನ ಕಣ್ಣನ್ನು ಇಡಬೇಕು, ಅದರಲ್ಲೂ ಅಸ್ಸಾಂ, ಕಾಶ್ಮೀರ ಮತ್ತು ಈಶಾನ್ಯದಂತಹ ಕೆಲವು ಪ್ರದೇಶಗಳಲ್ಲಿ, ಟೆಲಿಕಾಂ ಆಪರೇಟರ್‌ಗಳು ಔಪಚಾರಿಕ ಒಪ್ಪಂದಕ್ಕೆ ಪ್ರವೇಶಿಸುವ ಮೊದಲು ಹಾಗೂ ಹೊಸ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಅನುಮತಿಸುವ ಮೊದಲು ಆಯಾ ಅಂಗಡಿಗಳ ಪೊಲೀಸ್ ಪರಿಶೀಲನೆಯನ್ನು ಪ್ರಾರಂಭಿಸಬೇಕಾಗುತ್ತದೆ.